ಅನಾದಿಯ ಜಂಗಮವು ಶಿವಭಕ್ತನ ಮಠಕೆ ಬಂದು
'ಭಿಕ್ಷೆ ಲಿಂಗಾರ್ಪಿತಾ' ಎನಲು ಆ ಭಕ್ತನು ಜಂಗಮಕ್ಕೆ ಎರಗಿ,
ಸಿಂಹಾಸನದ ಗದ್ದುಗೆಯ ಮಾಡಿ,
ಆ ಜಂಗಮವ ಮೂರ್ತಂಗೊಳಿಸಿ
ತನ್ನಲ್ಲಿರ್ದ ಪರಮಪ್ರಸಾದವ ಎಡೆಮಾಡಿ ನೀಡಲೊಡನೆ,
ಆ ಜಂಗಮವು ಸ್ವೀಕರಿಸಲು,
ಆ ಭಕ್ತನ ಕರ್ಮದೋಷವೆಲ್ಲ ಹಿಂಗಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Anādiya jaṅgamavu śivabhaktana maṭhake bandu
'bhikṣe liṅgārpitā' enalu ā bhaktanu jaṅgamakke eragi,
sinhāsanada gaddugeya māḍi,
ā jaṅgamava mūrtaṅgoḷisi
tannallirda paramaprasādava eḍemāḍi nīḍaloḍane,
ā jaṅgamavu svīkarisalu,
ā bhaktana karmadōṣavella hiṅgittu nōḍā
jhēṅkāra nijaliṅgaprabhuve.