Index   ವಚನ - 450    Search  
 
ಆಚಾರಲಿಂಗ ಗುರುಲಿಂಗದಲ್ಲಿ ಅಡಗಿ ಶಿವಲಿಂಗವಾಯಿತ್ತಯ್ಯ. ಶಿವಲಿಂಗ ಜಂಗಮಲಿಂಗದಲ್ಲಡಗಿ ಪ್ರಸಾದಲಿಂಗವಾಯಿತ್ತಯ್ಯ. ಪ್ರಸಾದಲಿಂಗ ಮಹಾಲಿಂಗದಲ್ಲಿ ಅಡಗಿ, ನಿಶ್ಚಿಂತ ನಿರಾಕುಳ ಲಿಂಗವು ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.