Index   ವಚನ - 461    Search  
 
ಅಂಗದ ಗುಣಾದಿಗಳನಳಿದು ಲಿಂಗಸಂಗಿಯಾಗಿ ಮಂಗಳಪ್ರಭೆಯಲ್ಲಿ ಕೂಡಿ ಹಿಂಗದೆ ಪರಕ್ಕೆ ಪರವಾದ ಲಿಂಗವನಾಚರಿಸಬಲ್ಲಾತನೆ ನಿಮ್ಮ ಶರಣನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.