ಮಾತು ಮಥನಂಗಳಿಲ್ಲದಂದು, ನೀತಿ ನಿರ್ಮಲವಿಲ್ಲದಂದು,
ಜಾತಿಸೂತಕವಿಲ್ಲದಂದು,
ನಾಮ-ರೂಪ-ಕ್ರಿಯೆಗಳಿಲ್ಲದಂದು,
ಏನೇನೂ ಇಲ್ಲದಂದು, ತಾನೇ ನಿಷ್ಪತಿಯಾಗಿರ್ದನಯ್ಯ.
ತನ್ನ ಚಿದ್ವಿಲಾಸದಿಂದ ಓಂಕಾರವೆಂಬ ಪ್ರಣವವಾಯಿತ್ತು ನೋಡಾ.
ಆ ಓಂಕಾರವೆಂಬ ಪ್ರಣವದಲ್ಲಿ ಅಕಾರ ಉಕಾರ ಮಕಾರಂಗಳಾದವು.
ಆ ಅಕಾರ ಉಕಾರ ಮಕಾರಂಗಳೊಡನೆ ನಾದ-ಬಿಂದು-ಕಲೆಗಳಾದವು.
ಆ ನಾದ ಬಿಂದು ಕಲೆಗಳೊಡನೆ ಷಡಾಧಾರಚಕ್ರಂಗಳಾದವು.
ಆ ಷಡಾಧಾರಚಕ್ರಂಗಳಲ್ಲಿ
ಭಕ್ತ-ಮಹೇಶ-ಪ್ರಸಾದಿ-ಪ್ರಾಣಲಿಂಗಿ-ಶರಣ-ಐಕ್ಯರೆಂಬ
ಷಡ್ವಿಧಮೂರ್ತಿಗಳಾದರು ನೋಡಾ.
ಭಕ್ತಂಗೆ ಆಚಾರಲಿಂಗ, ಮಹೇಶ್ವರಂಗೆ ಗುರುಲಿಂಗ,
ಪ್ರಸಾದಿಗೆ ಶಿವಲಿಂಗ, ಪ್ರಾಣಲಿಂಗಿಗೆ ಜಂಗಮಲಿಂಗ,
ಶರಣಂಗೆ ಪ್ರಸಾದಲಿಂಗ, ಐಕ್ಯಂಗೆ ಮಹಾಲಿಂಗವಾಗಿ,
ನಿಶ್ಚಿಂತ ನಿರಾಕುಳ ನಿರ್ಭರಿತ ಲಿಂಗವ ಅರಿಯಬಲ್ಲಡೆ
ಆತನೆ ಪ್ರಾಣಲಿಂಗಸಂಬಂಧಿ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Mātu mathanaṅgaḷilladandu, nīti nirmalavilladandu,
jātisūtakavilladandu,
nāma-rūpa-kriyegaḷilladandu,
ēnēnū illadandu, tānē niṣpatiyāgirdanayya.
Tanna cidvilāsadinda ōṅkāravemba praṇavavāyittu nōḍā.
Ā ōṅkāravemba praṇavadalli akāra ukāra makāraṅgaḷādavu.
Ā akāra ukāra makāraṅgaḷoḍane nāda-bindu-kalegaḷādavu.
Ā nāda bindu kalegaḷoḍane ṣaḍādhāracakraṅgaḷādavu.
Ā ṣaḍādhāracakraṅgaḷalli Bhakta-mahēśa-prasādi-prāṇaliṅgi-śaraṇa-aikyaremba
ṣaḍvidhamūrtigaḷādaru nōḍā.
Bhaktaṅge ācāraliṅga, mahēśvaraṅge guruliṅga,
prasādige śivaliṅga, prāṇaliṅgige jaṅgamaliṅga,
śaraṇaṅge prasādaliṅga, aikyaṅge mahāliṅgavāgi,
niścinta nirākuḷa nirbharita liṅgava ariyaballaḍe
ātane prāṇaliṅgasambandhi nōḍā
jhēṅkāra nijaliṅgaprabhuve.