ಮನ ಬುದ್ಧಿ ಚಿತ್ತ ಅಹಂಕಾರ ಕರಣಚತುಷ್ಟಯಂಗಳ
ನಿರ್ಮಲಸ್ವರೂಪ ಮಾಡಿ,
ಜ್ಞಾನೈಕ್ಯವೆಂಬ ಶಿವಾಲಯವ ಹೊಕ್ಕು
ಪರಬ್ರಹ್ಮಲಿಂಗವ ಪೂಜೆಗೊಂಬ ಪರಿಯ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Mana bud'dhi citta ahaṅkāra karaṇacatuṣṭayaṅgaḷa
nirmalasvarūpa māḍi,
jñānaikyavemba śivālayava hokku
parabrahmaliṅgava pūjegomba pariya nōḍā
jhēṅkāra nijaliṅgaprabhuve.