ಒಂಬತ್ತು ಬಾಗಿಲ ಮನೆಯೊಳಗೆ
ಒಂದು ಪಕ್ಷಿ ಇಂಬನರಿತು ಗೂಡನಿಕ್ಕುವುದ ಕಂಡೆನಯ್ಯ.
ಅದು ಹೇಗೆಂದಡೆ:
ಅದಕ್ಕೆ ಬುಡವೊಂದು, ಕೊನೆ ಮೂರು,
ಆರು ಕಂಬದ ಶಿವಾಲಯವ ರಚಿಸಿ,
ಇಪ್ಪತ್ತೈದು ಸೋಪಾನಂಗಳ ಮಾಡಿ,
ಐವತ್ತೆರಡು ಎಸಳಿನಿಂದ ರಚಿಸಿ ಆಡುವ ಹಂಸನ
ಒಬ್ಬ ಸತಿಯಳು ಹಿಡಿದು,
ನಿರ್ವಯಲಾದ ವಿಚಿತ್ರವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.