Index   ವಚನ - 508    Search  
 
ಆರು ಸ್ಥಲದಲ್ಲಿ ಆರು ಮೂರ್ತಿಗಳ ಕಂಡೆನಯ್ಯ. ಆರು ಮೂರ್ತಿಗಳಲ್ಲಿ ಆರು ಲಿಂಗವ ಕಂಡೆನಯ್ಯ. ಆರರಿಂದತ್ತತ್ತ ಮೀರಿದ ಮಹಾಘನಲಿಂಗವ ಕಂಡು, ನಿರ್ವಿಕಲ್ಪ ನಿತ್ಯಾತ್ಮಕನಾದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.