Index   ವಚನ - 516    Search  
 
ಆದಿಲಿಂಗದ ಸಂಗದಿಂದ ಒಬ್ಬ ಚಿದಂಗನೆಯ ಕಂಡೆನಯ್ಯ. ಆ ಚಿದಂಗನೆಯ ಬಸುರಲ್ಲಿ ಮೂವರು ಮಕ್ಕಳು ಹುಟ್ಟಿ, ಆರು ಕೇರಿಗಳಲ್ಲಿ ಇಪ್ಪರು ನೋಡಾ. ಆರು ಕೇರಿಗಳಲ್ಲಿ ಆರು ಮೂರ್ತಿಗಳು ಆರಾರ ಲಿಂಗಾರ್ಚನೆಯ ಮಾಡಿ ಮಹಾಮೇರುವೆಯ ಪೊಕ್ಕು, ಪರಕ್ಕೆಪರವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.