Index   ವಚನ - 557    Search  
 
ಹಾರುವಗೇರಿಯಲ್ಲಿ ಇರುತಿಪ್ಪ ಐವರು ನಾರಿಯರ ಕಂಡೆನಯ್ಯ. ಅವರಿಂಗೆ ಏಳುಮಂದಿ ಮಕ್ಕಳು ಹುಟ್ಟಿ ಎಂಟುಮಂದಿ ನೆಂಟರ ಸಂಗವ ಮಾಡಿ, ಈ ಜಗವನೆಲ್ಲಾ ಏಡಿಸ್ಯಾಡುತಿಪ್ಪರು ನೋಡಾ. ಇದು ಕಾರಣ, ಪ್ರಥಮಕಾಲದಲ್ಲಿ ಆದಿಯ ಗಣೇಶ್ವರ ಬಂದು, ಏಳುಮಂದಿ ಮಕ್ಕಳ ಹಿಡಿದು, ಐವರು ನಾರಿಯರ ಕೊಂದು, ಹಾರುವಗೇರಿಯ ಸೂರೆಮಾಡಿದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.