ಮೂರು ಮುಖದ ಭಾಮಿನಿಯು
ಆರುಮುಖದ ಪುರುಷನ ಸಂಗವ ಮಾಡುತಿರ್ಪಳು ನೋಡಾ.
ಬೇರೊಂದು ಸ್ಥಲದಲ್ಲಿ ಒಬ್ಬ ಸತಿಯಳು ಭೇರಿನಾದವ ಕೇಳಿ
ಪರಕೆಪರವಶವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Mūru mukhada bhāminiyu
ārumukhada puruṣana saṅgava māḍutirpaḷu nōḍā.
Bērondu sthaladalli obba satiyaḷu bhērinādava kēḷi
parakeparavaśavāda sōjigava nōḍā
jhēṅkāra nijaliṅgaprabhuve.