Index   ವಚನ - 560    Search  
 
ಆರು ಕಾಲುಳ್ಳ ಗೋವಿಂಗೆ ಮೂರು ಬಾಲುಳ್ಳ ಕರುವ ಕಂಡೆನಯ್ಯ. ಆ ಕರುವಿಂಗೆ ಮುಖ ಒಂದು, ಎರಡು ಕೊಂಬುಗಳಿಪ್ಪವು ನೋಡಾ. ಆ ಕರುವ ಹಿಡಿದಾಡುವ ಹಿರಿಯರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.