Index   ವಚನ - 561    Search  
 
ಕಾಮದ ಕಳವಳವಳಿದು, ಸೀಮೆಯ ದಾಂಟಿ ನಿಸ್ಸೀಮನಾಗಿ, ಮಹದರಿವಿನಂಬರವೆಂಬ ನಿರ್ವಯಲಲ್ಲಿ ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯರ ಕೂಡಿ ನಿರವಯಲಿಂಗವನಾಚರಿಸುತಿರ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.