Index   ವಚನ - 568    Search  
 
ಸಾಗರವ ನುಂಗಿದ ಕಪ್ಪೆ ಕೂಗಿ ಆಗ್ರಹ ಮಾಡುತಿಪ್ಪುದು ನೋಡಾ. ನಿಗ್ರಹಂಗಳ ಹರಿದು ಆಗ್ರಹವ ಪೊಕ್ಕು ನೋಡಲು ಸಾಗರವ ನುಂಗಿದ ಕಪ್ಪೆ ಸತ್ತಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.