Index   ವಚನ - 571    Search  
 
ಮೂರು ರತ್ನವ ಒಂದು ಕೋಗಿಲೆ ನುಂಗಿ ಕೂಗುತಿದೆ ನೋಡಾ. ಕೂಗಿನ ಶಬ್ದವ ಕೇಳಿ ನಾಗಲೋಕದಲ್ಲಿಪ್ಪ ನಾಗಪುರುಷನು ಅನಾದಿಯಲ್ಲಿ ನಿಂದು ಆ ಕೋಗಿಲೆಯ ಹಿಡಿದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.