Index   ವಚನ - 593    Search  
 
ಕತ್ತಲಕಾವುಳದ ಮನೆಯಲ್ಲಿ ಒಬ್ಬ ಪುರುಷನು ಸೀಮೆಯ ಪೊಕ್ಕು, ಪರಿಪರಿಯ ಮಾಡುತಿಪ್ಪನು ನೋಡಾ. ಇದು ಕಾರಣ, ಕತ್ತಲಕಾವುಳದ ಮನೆಯ ಕೆಡಿಸಿ, ಆ ಪುರುಷನ ಹಿಡಿದು, ಸೀಮೆಯನಳಿದು ನಿಸ್ಸೀಮನಾಗಬಲ್ಲರೆ ಆತನಿಗೆ ಭಾವಲಿಂಗಸಂಬಂಧಿಯೆಂಬೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.