Index   ವಚನ - 598    Search  
 
ಎನ್ನ ನಾನರಿಯದಂದು ನೀನೇ ಗುರುವಾಗಿ ಎನ್ನ ತೋರಿದೆಯಯ್ಯ. ಎನ್ನ ತೋರಿದ ಕಾರಣ ಎನ್ನಂತರಂಗದಲ್ಲಿ ಶಿವಾತ್ಮಜ್ಞಾನ ಉಕ್ಕಿ, ಶಿವಶಿವಾ ಎನುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.