Index   ವಚನ - 667    Search  
 
ಜ್ಞಾನ ತನ್ನೊಳಗಾದ ಬಳಿಕ ಲೋಕದ ಹಂಗಿನ್ನ್ಯಾತಕಯ್ಯ? ಮಹಾಲಿಂಗ ತನ್ನೊಳಗಾದ ಬಳಿಕ ಇಹಪರದಹಂಗಿನ್ನ್ಯಾತಕಯ್ಯ? ನಿಃಕಲನಿಜಲಿಂಗದಲ್ಲಿ ತಾನು ತಾನಾದ ಬಳಿಕ ಸಕಲ ಬ್ರಹ್ಮಾಂಡದ ಹಂಗಿನ್ನ್ಯಾತಕಯ್ಯ? ಇದು ಕಾರಣ, ಝೇಂಕಾರ ನಿಜಲಿಂಗಪ್ರಭುವೆ ನಿಮ್ಮ ಶರಣನ ಸಂಬಂಧವು.