ಸಾವಿರೆಸಳಮಂಟಪದಲ್ಲಿ ಒಬ್ಬ ಸತಿಯಳು
ನಿಂದಿರುವುದ ಕಂಡೆನಯ್ಯ.
ಆ ಸತಿಯಳ ಅಂಗದಲ್ಲಿ ಇಪ್ಪತ್ತೈದು ಶಿವಾಲಯವ ಕಂಡೆನಯ್ಯ.
ಆ ಶಿವಾಲಯದೊಳಗೊಬ್ಬ ಪುರುಷನು ಐವರ ಕೂಡಿಕೊಂಡು
ಆ ಸತಿಯಳ ಸಂಗದಿಂದ ಚಿದುಲಿಂಗಾರ್ಚನೆಯಂ ಮಾಡಿ
ಚಿದ್ಘನಸ್ವರೂಪನಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Sāviresaḷamaṇṭapadalli obba satiyaḷu
nindiruvuda kaṇḍenayya.
Ā satiyaḷa aṅgadalli ippattaidu śivālayava kaṇḍenayya.
Ā śivālayadoḷagobba puruṣanu aivara kūḍikoṇḍu
ā satiyaḷa saṅgadinda ciduliṅgārcaneyaṁ māḍi
cidghanasvarūpanāda sōjigava nōḍā
jhēṅkāra nijaliṅgaprabhuve.
ಸ್ಥಲ -
ಸ್ವಯಜ್ಞಾನ ಉದಯವಾದ ಸ್ಥಲ