ದೇಹವೆಂಬ ದೇಗುಲದೊಳಗೆ
ಒಬ್ಬ ಸತಿಯಳು ನಿಂದಿರುವುದ ಕಂಡೆನಯ್ಯ.
ಆ ಸತಿಯಳ ಸಂಗದಿಂದ ಅಂಗಲಿಂಗಸಂಬಂಧವ
ಗರ್ಭೀಕರಿಸಿಕೊಂಡು
ನಿರಂಜನದೇಶಕೆ ಹೋಗಿ
ನಿಃಪ್ರಿಯವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Dēhavemba dēguladoḷage
obba satiyaḷu nindiruvuda kaṇḍenayya.
Ā satiyaḷa saṅgadinda aṅgaliṅgasambandhava
garbhīkarisikoṇḍu
niran̄janadēśake hōgi
niḥpriyavāda sōjigava nōḍā
jhēṅkāra nijaliṅgaprabhuve.