Index   ವಚನ - 727    Search  
 
ಬ್ರಹ್ಮನಿಲ್ಲದಂದು, ವಿಷ್ಣುವಿಲ್ಲದಂದು, ರುದ್ರನಿಲ್ಲದಂದು, ಈಶ್ವರನಿಲ್ಲದಂದು, ಸದಾಶಿವನಿಲ್ಲದಂದು, ಪರಶಿವನಿಲ್ಲದಂದು, ಅತ್ತತ್ತಲೆ ಪರಿಪೂರ್ಣಲಿಂಗವು ತಾನೇ ನೋಡಾ. ಆ ಲಿಂಗವ ನೋಡಹೋಗದ ಮುನ್ನ, ಅದು ಎನ್ನ ನುಂಗಿತ್ತು. ಅದಕ್ಕೆ ನಯನ ಒಂದು, ವದನ ಮೂರು, ಹಸ್ತವಾರು, ಮೂವತ್ತಾರು ಪಾದಂಗಳು. ಒಂಬತ್ತು ಬಾಗಿಲಮನೆಯೊಳಗೆ ಸುಳಿದಾಡುತಿಪ್ಪನು ನೋಡಾ. ಆ ಸುಳುವಿನ ಸುಳುವ ಒಬ್ಬ ಸತಿಯಳು ಕಂಡು ನಿರ್ಗತವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.