Index   ವಚನ - 729    Search  
 
ನಿರಂಜನದೇಶದಲ್ಲಿ ಮಹಾಮಹಿಮನ ಕಂಡೆನಯ್ಯ. ಆ ಮಹಿಮನ ಸಂಗದಿಂದ ಒಬ್ಬ ಸತಿಯಳು ಮೂರಾರ ದೇಶವ ನೋಡಿ, ತ್ರಿಕೂಟವೆಂಬ ಗಿರಿಯನೇರಿ, ಸಾವಿರೆಸಳಮಂಟಪವ ಪೊಕ್ಕುದ ನಾನೇನೆಂಬೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.