ಲಿಂಗವೇ ತಾನಾಗಿ, ತಾನೇ ಲಿಂಗವಾಗಿ,
ಹಿಂಗದೆ ಪ್ರಣಮಪಂಚಾಕ್ಷರಿಯ ಜಪಿಸಿ,
ಮಂಗಳ ಪ್ರಭೆಯಲ್ಲಿ ಕೂಡಿ,
ನಿಃಸಂಗಿ ನಿರಾಳನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Liṅgavē tānāgi, tānē liṅgavāgi,
hiṅgade praṇamapan̄cākṣariya japisi,
maṅgaḷa prabheyalli kūḍi,
niḥsaṅgi nirāḷanāda nōḍā
jhēṅkāra nijaliṅgaprabhuve.