Index   ವಚನ - 73    Search  
 
ಖಂಡಿತವಿಲ್ಲದ ಅಖಂಡಿತ ನೀನೆ. ನಿಮ್ಮ ಕಂಡವರುಂಟೆ? ಹೇಳಯ್ಯ. ಕಂಡೆನೆಂಬವರೆಲ್ಲ ಬಂಜೆಯ ಮಕ್ಕಳು ನೀ ನಿಂದ ಹೆಜ್ಜೆಯ ಕೆಳಗೆ ಒಂದು ಬಿಂದು ಹುಟ್ಟಿ ಬೆಳಗುವ ಛಂದವ ಕಂಡು ಕಣ್ದೆರೆದೆ ಕಾಣಾ! ರಾಮನಾಥ.