Index   ವಚನ - 84    Search  
 
ಜಂಬೂದ್ವೀಪವನೆಲ್ಲ ತಿರಿಗಿದಡೇನು? ಜಂಬುಕ ಶಂಭುಧ್ಯಾನದಲ್ಲಿ ಸೈವೆರಗಪ್ಪುದೆ? ಕುಂಭಿನಿಯ ತಿರಿಗಿ ಕೋಟಿ ತೀರ್ಥವ ಮಿಂದಡೇನು? ಶಂಭು! ನಿಮ್ಮಲ್ಲಿ ಸ್ವಯವಾಗದವನು ಕುಂಭಿನಿಯ ತಿರಿಗಿದ ಡೊಂಬನಂತೆ ಕಾಣಾ! ರಾಮನಾಥ.