Index   ವಚನ - 97    Search  
 
ದೇಹಗೊಂಡು ಹುಟ್ಟಿದವರು ಒಪ್ಪಚ್ಚಿ ದೇಹಾರವ ಮಾಡುವಿರಯ್ಯ. ದೇಹಾರವ ಮಾಡಿ ಲಿಂಗಾರ್ಪಿತವ ಮಾಡದೆ ಆಹಾರವ ಕೊಂಡಡೆ ಕೋಳಿ ಹುಳವನಾಯ್ದುತಿಂದಂತೆ ಕಾಣಾ! ರಾಮನಾಥ.