Index   ವಚನ - 6    Search  
 
ಅಪ್ಪುವಿನಿಂದ ಸಕಲಮಯವೆಲ್ಲವು ಕಲ್ಪಿಸಿ, ಅಪ್ಪುವಿನಿಂದ ಮಲ ನಿರ್ಮಲವೆಂಬುದಾಯಿತ್ತು. ವಸ್ತುವಿನಿಂದ ರೂಪು ನಿರೂಪೆಂಬುದಾಯಿತ್ತು. ಜಲದಿಂದಾದ ಪಂಕವ ಜಲ ತೊಳೆದು ನಿರ್ಮಲವಾದಂತೆ, ನಿರೂಪು ಸ್ವರೂಪನಾಗಿ ಸ್ವರೂಪು ನಿರೂಪನಾಗಿ ಉಭಯವು ನೀನಾಗಿ, ನಾ ಕಂಡು ನುಡಿವುದಕ್ಕೆ ಎನಗೊಂದೆಡೆಯಿಲ್ಲ, ಕಾಲಾಂತಕ ಭೀಮೇಶ್ವರಲಿಂಗವು ನೀನೆಯಾಗಿ.