ಉಪ್ಪಿನ ನೀರಿಂಗೆ ಪುನನಾಮ ಬಪ್ಪುದಲ್ಲದೆ
ಮುತ್ತಿನ ನೀರಿಂಗೆ ಪುನನಾಮವುಂಟೆ?
ಪೂರ್ವವನಳಿದು ಪುನರ್ಜಾತನಾದಲ್ಲಿ
ಮತ್ತೆ ಲೌಕಿಕವ ಬೆರಸಬಹುದೆ?
ರುಂದಿಯ ಫಳದಂತೆ ಸಂದೇಹ ನಾಮವಾಯಿತ್ತು.
ಭಕ್ತಜಂಗಮವಾಗಿ ಮರ್ತ್ಯರು ಎನ್ನವರೆಂದಡೆ
ಕರ್ತೃತ್ವ ಭಕ್ತಿಯಿತ್ತಲೆ ಉಳಿಯಿತ್ತು.
ಕಾಲಾಂತಕ ಭೀಮೇಶ್ವರಲಿಂಗನು ಅವರಿಗೆ
ಕತ್ತಲೆಯಾಗಿರ್ಪನು.
Art
Manuscript
Music
Courtesy:
Transliteration
Uppina nīriṅge punanāma bappudallade
muttina nīriṅge punanāmavuṇṭe?
Pūrvavanaḷidu punarjātanādalli
matte laukikava berasabahude?
Rundiya phaḷadante sandēha nāmavāyittu.
Bhaktajaṅgamavāgi martyaru ennavarendaḍe
kartr̥tva bhaktiyittale uḷiyittu.
Kālāntaka bhīmēśvaraliṅganu avarige
kattaleyāgirpanu.