Index   ವಚನ - 115    Search  
 
ಅಂಥ ಬ್ರಹ್ಮಾಂಡವ ಹದಿನಾಲ್ಕುಲಕ್ಷದ ಮೇಲೆ ಸಾವಿರದನೂರಮೂವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಮುಂಡಿಯೆಂಬ ಭುವನ. ಆ ಭುವನದೊಳು ರುಂಡಮಾಲಾಧರನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಐನೂರರವತ್ತೈದುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಐನೂರರವತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.