Index   ವಚನ - 120    Search  
 
ಅಂಥ ಬ್ರಹ್ಮಾಂಡವ ಹತ್ತೊಂಬತ್ತುಲಕ್ಷದ ಮೇಲೆ ಸಾವಿರದ ನೂರಾ ಎಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಪ್ರಭಾಸವೆಂಬ ಭುವನ. ಆ ಭುವನದೊಳು ತೇಜೋಮೂರ್ತಿಯೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಐನೂರ ತೊಂಬತ್ತುಕೋಟಿ ನಾರಾಯಣ-ಬ್ರಹ್ಮ- ರುದ್ರಾದಿಗಳಿಹರು ನೋಡಾ. ಐನೂರತೊಂಬತ್ತು ಕೋಟಿ ವೇದಪುರುಷರು ಮುನೀಂದ್ರರು ಚಂದ್ರಾದಿತ್ಯರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.