Index   ವಚನ - 141    Search  
 
ಅಂಥ ಬ್ರಹ್ಮಾಂಡವ ನಾಲ್ವತ್ತುಲಕ್ಷದ ಮೇಲೆ ಸಾವಿರದ ಮುನ್ನೂರಾ ತೊಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಆನಂದವೆಂಬ ಭುವನ. ಆ ಭುವನದೊಳು ಸದಾನಂದವೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಆರುನೂರಾ ತೊಂಬತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ. ಆರುನೂರಾ ತೊಂಬತ್ತೈದುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.