Index   ವಚನ - 147    Search  
 
ಅಂಥ ಬ್ರಹ್ಮಾಂಡವ ನಾಲವತ್ತಾರುಲಕ್ಷದ ಮೇಲೆ ಸಾವಿರದ ನಾನೂರಾ ಐವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಸುರೇಶಾನವೆಂಬ ಭುವನ. ಆ ಭುವನದೊಳು ಸುರೇಂದ್ರಾಧಿಪನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಏಳುನೂರಿಪ್ಪತ್ತೈದುಕೋಟಿ ದೇವರ್ಕಳು ವೇದಪುರುಷರು ಮುನೀಂದ್ರರು ಇಂದ್ರಚಂದ್ರಾದಿತ್ಯರಿಹರು ನೋಡಾ. ಏಳುನೂರಿಪ್ಪತ್ತೈದು ಕೋಟಿ ರುದ್ರ ಬ್ರಹ್ಮ ನಾರಾಯಣರಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.