Index   ವಚನ - 154    Search  
 
ಅಂಥ ಬ್ರಹ್ಮಾಂಡವ ಐವತ್ಮೂರುಲಕ್ಷದ ಮೇಲೆ ಸಾವಿರದಾ ಐನೂರಾ ಇಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಪ್ರಸೀದನವೆಂಬ ಭುವನ. ಆ ಭುವನದೊಳು ಅಖಿಲಾಂಡಕೋಟಿಬ್ರಹ್ಮಾಂಡನಾಯಕನೆಂಬ ರುದ್ರಮೂರ್ತಿ ಇಹನು ಆ ರುದ್ರಮೂರ್ತಿಯ ಓಲಗದಲ್ಲಿ ಏಳುನೂರಾ ಅರವತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು. ಏಳುನೂರಾ ಅರವತ್ತುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.