Index   ವಚನ - 173    Search  
 
ಅಂಥ ಬ್ರಹ್ಮಾಂಡವ ಎಪ್ಪತ್ತೆರಡುಲಕ್ಷದ ಮೇಲೆ ಸಾವಿರದಾ ಏಳುನೂರಾ ಹದಿನೆಂಟು ಬ್ರಹ್ಮಾಂಡವನೊಳಕೊಂಡುದೊಂದು ಜ್ವಾಲಾಂತಕವೆಂಬ ಭುವನ. ಆ ಭುವನದೊಳು ಜ್ವಲತ್ಕಾಲಾನಲಾಭಾಸನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಎಂಟುನೂರಾ ಅರವತ್ತೈದುಕೋಟಿ ವೇದಪುರುಷರು ಮುನೀಂದ್ರರು ಚಂದ್ರಾದಿತ್ಯರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.