ವಚನ - 1007     
 
ಒಂದು ಮನ; ಆ ಮನದಲ್ಲಿ ಲಿಂಗತ್ರಯವನು ಒಂದೆ ಬಾರಿ[ಗೆ] ನೆನೆವ ಪರಿಯೆಂತೊ? ಅರಿದರಿದು ಲಿಂಗಜಾಣಿಕೆ! ನೆನೆವ ಮನ ತಾನದವರಿಗಲ್ಲದೆ. ಮುಂದ ನೆನೆದಡೆ ಹಿಂದಿಲ್ಲ; ಹಿಂದ ನೆನೆದಡೆ ಮುಂದಿಲ್ಲ. ಒಂದರೊಳಗೆ ಎರಡೆರಡಿಪ್ಪವೆಂದಡೆ, ಅದು ಭಾವಭ್ರಮೆಯಲ್ಲದೆ ಸಹಜವಲ್ಲ. ನಿರುಪಾಧಿಕಲಿಂಗವನುಪಾಧಿಗೆ ತರಬಹುದೆ? ಸ್ವತಂತ್ರಲಿಂಗವ ಪರತಂತ್ರಕ್ಕೆ ತರಬಹುದೆ? ಗುಹೇಶ್ವರಾ_ನಿಮ್ಮ ಬೆಡಗು ಬಿನ್ನಾಣವನರಿದೆನಾಗಿ, ಎಂತಿರ್ದುದಂತೆ ಸಂತ!