Index   ವಚನ - 186    Search  
 
ಅಂಥ ಬ್ರಹ್ಮಾಂಡವ ಎಂಬತ್ತೈದುಲಕ್ಷದ ಮೇಲೆ ಸಾವಿರದಾ ಎಂಟುನೂರಾನಾಲ್ವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಊರ್ಧ್ವಶೇಷವೆಂಬ ಭುವನ. ಆ ಭುವನದೊಳು ಊರ್ಧ್ವಪಾದನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಒಂಬಯಿನೂರಾ ಇಪ್ಪತ್ತುಕೋಟಿ ದೇವರ್ಕಳು ವೇದಪುರುಷರು ಮುನೀಂದ್ರರು ಇಂದ್ರಚಂದ್ರಾದಿತ್ಯರು ಇಹರು ನೋಡಾ. ಒಂಬಯಿನೂರಾ ಇಪ್ಪತ್ತುಕೋಟಿ ಬ್ರಹ್ಮ ನಾರಾಯಣ ರುದ್ರರಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.