Index   ವಚನ - 198    Search  
 
ಅಂಥ ಬ್ರಹ್ಮಾಂಡವ ತೊಂಬತ್ತೇಳು ಲಕ್ಷದ ಮೇಲೆ ಸಾವಿರದಾ ಒಂಬೈನೂರಾ ಅರುವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಕ್ಷಯಾಂತವೆಂಬ ಭುವನ. ಆ ಭುವನದೊಳು ವಿಶ್ವೇಶ್ವರನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಒಂಬತ್ತುನೂರಾ ಎಂಬತ್ತು ಕೋಟಿ ಮುನೀಂದ್ರರು ದೇವರ್ಕಳು ಇಂದ್ರಚಂದ್ರಾದಿತ್ಯರು ವೇದಪುರುಷರು ಇಹರು ನೋಡಾ. ಒಂಬತ್ತುನೂರಾ ಎಂಬತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.