ಅಂಥ ಬ್ರಹ್ಮಾಂಡವ ಎರಡುಕೋಟಿಯ ಮೇಲೆ
ಎರಡುಸಾವಿರದಾ ಹದಿನೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಜ್ವಲನವೆಂಬ ಭುವನ.
ಆ ಭುವನದೊಳು ಜ್ವಲತ್ಕಾಲಾನಲಾಭಾಸನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ಹತ್ತುಕೋಟಿ
ಇಂದ್ರ ನಾರಾಯಣ ಬ್ರಹ್ಮ ರುದ್ರಾದಿಗಳಿಹರು.
ಸಾವಿರಕೋಟಿಯ ಮೇಲೆ ಹತ್ತುಕೋಟಿ ವೇದಪುರುಷರು ಮುನೀಂದ್ರರು
ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.