Index   ವಚನ - 205    Search  
 
ಅಂಥ ಬ್ರಹ್ಮಾಂಡವ ಐದುಕೋಟಿಯ ಮೇಲೆ ಎರಡುಸಾವಿರದಾ ಮೂವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಪಿಂಗವೆಂಬ ಭುವನ. ಆ ಭುವನದೊಳು ಮಹಾಘೋರನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಸಾವಿರಕೋಟಿಯ ಮೇಲೆ ನಾಲ್ವತ್ತುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು. ಸಾವಿರಕೋಟಿಯ ಮೇಲೆ ನಾಲ್ವತ್ತುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.