Index   ವಚನ - 211    Search  
 
ಅಂಥ ಬ್ರಹ್ಮಾಂಡವ ಇಪ್ಪತ್ತುಕೋಟಿಯ ಮೇಲೆ ಎರಡುಸಾವಿರದಾ ತೊಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಅವ್ಯಯವೆಂಬ ಭುವನ. ಆ ಭುವನದೊಳು ಆದಿಯೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಸಾವಿರ ಕೋಟಿಯ ಮೇಲೆ ನೂರು ಕೋಟಿ ಇಂದ್ರ ಬ್ರಹ್ಮ ನಾರಾಯಣ ರುದ್ರರಿಹರು. ಸಾವಿರ ಕೋಟಿಯ ಮೇಲೆ ನೂರುಕೋಟಿ ಚಂದ್ರಾದಿತ್ಯರು ವೇದ ಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.