Index   ವಚನ - 215    Search  
 
ಅಂಥ ಬ್ರಹ್ಮಾಂಡವ ಅರುವತ್ತುಕೋಟಿಯ ಮೇಲೆ ಮೂರುಸಾವಿರದಾ ಮೂವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಬುಧವೆಂಬ ಭುವನ. ಆ ಭುವನದೊಳು ಆಧಾರನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಸಾವಿರಕೋಟಿಯ ಮೇಲೆ ಐದುನೂರುಕೋಟಿ ಬ್ರಹ್ಮ ನಾರಾಯಣ ರುದ್ರರಿಹರು. ಸಾವಿರಕೋಟಿಯ ಮೇಲೆ ಐನೂರುಕೋಟಿ ವೇದಪುರುಷರು ಮುನೀಂದ್ರರು ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.