Index   ವಚನ - 221    Search  
 
ಅಂಥ ಬ್ರಹ್ಮಾಂಡವ ಮುನ್ನೂರುಕೋಟಿಯ ಮೇಲೆ ನಾಲ್ಕು ಸಾವಿರದಾ ಎಂಟು ಬ್ರಹ್ಮಾಂಡವನೊಳಕೊಂಡುದೊಂದು ಹಾರ್ತವೆಂಬ ಭುವನ. ಆ ಭುವನದೊಳು ಆನಂದಬ್ರಹ್ಮನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಸಾವಿರಕೋಟಿಯ ಮೇಲೆ ನೂರಾತೊಂಬತ್ತೆರಡುಕೋಟಿಯು ಇನ್ನೂರೆಂಬತ್ತುಕೋಟಿ ಬ್ರಹ್ಮ ನಾರಾಯಣ ರುದ್ರರಿಹರು. ಸಾವಿರಕೋಟಿಯ ಮೇಲೆ ನೂರಾತೊಂಬತ್ತೆರಡುಕೋಟಿಯು ಇನ್ನೂರೆಂಬತ್ತು ಕೋಟಿ ವೇದಪುರುಷರು ಮುನೀಂದ್ರರು ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.