Index   ವಚನ - 223    Search  
 
ಅಂಥ ಬ್ರಹ್ಮಾಂಡವ ಅನಂತಕೋಟಿಯ ಬ್ರಹ್ಮಾಂಡವನೊಳಕೊಂಡುದೊಂದು ಕಾಲಾಗ್ನಿರುದ್ರವೆಂಬ ಭುವನ. ಆ ಭವನದೊಳು ಓಂಕಾರನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಅನಂತಕೋಟಿ ರುದ್ರರು ಅನಂತಕೋಟಿ ಬ್ರಹ್ಮರು ಅನಂತಕೋಟಿ ನಾರಾಯಣರಿಹರು ನೋಡಾ. ಅನಂತಕೋಟಿ ಇಂದ್ರರು ಅನಂತಕೋಟಿ ಚಂದ್ರರು ಅನಂತಕೋಟಿ ವೇದಪುರುಷರು ಅನಂತಕೋಟಿ ಮುನೀಂದ್ರರು ಅನಂತಕೋಟಿ ದೇವರ್ಕಳಿಹರು ನೋಡಾ ಅಪ್ರಮಾಣ ಕೂಡಲಸಂಗಮದೇವಾ.