Index   ವಚನ - 255    Search  
 
ತ್ರಿಮಾಸಕ್ಕೆ ಮಜ್ಜೆ ಅಸ್ಥಿ ಪುಟ್ಟುವುದು. ಚತುರ್ಮಾಸಕ್ಕೆ ಕೇಶ ಗುಹ್ಯ ಪುಟ್ಟುವುದು. ಪಂಚಮಾಸಕ್ಕೆ ಕರ್ಣ ಅಕ್ಷಿ ನಾಸಿಕಾದಿ ರಂಧ್ರಂಗಳು ಪುಟ್ಟುವವು ನೋಡಾ. ಇದಕ್ಕೆ ಈಶ್ವರ ಉವಾಚ: ಮಜ್ಜಾಸ್ಥೀನಿಸ್ತ್ರೀ ತ್ರಿಮಾಸೈಃ ಕೇಶಗುಹ್ಯಚತುರ್ಥಕೇ | ಕರ್ಣಾಕ್ಷಿ ನಾಸಿಕಸ್ಯಾದಿ ರಂಧ್ರಾದಿ ಮಾಸಪಂಚಕೇ || ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.