Index   ವಚನ - 283    Search  
 
ರೇಚಕ ಪೂರಕಮಂ ಬಿಟ್ಟು ಕುಂಭಕವಾಗಿ ಆ ಕುಂಭಕದೊಳು ಸುಸ್ಥಿರವಾಗಿ ನಿಂದಡಾತನೆ ಪರಮಯೋಗಿ. ಆತನೆ ದಿವ್ಯಯೋಗಿ. ಇದಕ್ಕೆ ಶ್ರುತಿ: `ಕುಂಭಕಂ ಪರಮಂ ಪದಂ' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.