Index   ವಚನ - 288    Search  
 
ಇನ್ನು ಅಗ್ನಿಧಾರಣವೆಂತೆಂದಡೆ: ಮೂಲಜ್ವಾಲೆಯನೆಬ್ಬಿಸಿ ಸುಷುಮ್ನನಾಳದ ಬಟ್ಟೆಯ ತುದಿಯನಡರಿ ಸಹಸ್ರದಳಮಂಟಪನೊಳಹೊಕ್ಕು ನೋಡಿ ಅಲ್ಲಿ ವಿಶ್ವತೋಮುಖ, ವಿಶ್ವತೋಚಕ್ಷು, ವಿಶ್ವತೋಹಸ್ತ, ವಿಶ್ವತೋಪಾದವನುಳ್ಳ ಮಹಾಗುರುವಂ ಕಂಡು ಪರಿಣಾಮಿಸುತ್ತಿರ್ದನು ನೋಡಾ ಅಪ್ರಮಾಣಕೂಡಲಸಂಗಮದೇವಾ.