Index   ವಚನ - 293    Search  
 
ಇನ್ನು ಅಮೃತಧಾರಣವದೆಂತೆಂದಡೆ: ಮೂಲವಾಯುವಂ ಪಿಡಿದು ಮೂಲಜ್ವಾಲೆಯನೆಬ್ಬಿಸಿ, ಅಮಳೋಕ್ಯದ್ವಾರದಲ್ಲಿ ಜಿಹ್ವೆಯನೇರಿಸಿ, ಚಂದ್ರಮಂಡಲದೊಳಿಹ ಅಮೃತವನುಂಡರೆ ಅಜ ಹರಿ ಸುರ ರುದ್ರಾದಿಗಳಿಗೊಡೆಯ ನೋಡಾ ಅಪ್ರಮಾಣಕೂಡಲಸಂಗಮದೇವಾ.