ಮಣಿಪೂರಕಚಕ್ರದ ದಶದಳ ಪದ್ಮವ ಪೊಕ್ಕು ಸಾಧಿಸಿ,
ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು,
ಅಲ್ಲಿ ಕೃಷ್ಣವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ
ಅಧೋಮುಖದಾಗಿಹ ಕುಂಡಲಿಯ ಸರ್ಪನ ಬಾಲವಂ ಮೆಟ್ಟಿ
ಊರ್ಧ್ವಮುಖವಂ ಮಾಡಿ, ಪಶ್ಚಿಮವಾಯು ತಿರುಗಿ
ಅನಿಲಾಗ್ನಿಯ ದೆಸೆಯಿಂದ ಗ್ರಂಥಿಗಳು ಕರಗಿ
ಮನಪವನಬಿಂದು ಸಂಯೋಗದಿಂದೇಕಾಗ್ರ ಚಿತ್ತದಿಂ
ಅನಾಹತಚಕ್ರದ ದ್ವಾದಶದಳದ ಪದ್ಮವ ಹೊಕ್ಕನು
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Maṇipūrakacakrada daśadaḷa padmava pokku sādhisi,
alliha mantra-pada-varṇa-bhuvana-tatva-kalegaḷaṁ kaṇḍu,
alli kr̥ṣṇavarṇavāgiha jyōtirmayaliṅgamaṁ berasi
adhōmukhadāgiha kuṇḍaliya sarpana bālavaṁ meṭṭi
ūrdhvamukhavaṁ māḍi, paścimavāyu tirugi
anilāgniya deseyinda granthigaḷu karagi
manapavanabindu sanyōgadindēkāgra cittadiṁ
anāhatacakrada dvādaśadaḷada padmava hokkanu
apramāṇakūḍalasaṅgamadēvā.