Index   ವಚನ - 301    Search  
 
ಆ [ಆಜ್ಞಾಚಕ್ರದ] ದ್ವಿದಳಪದ್ಮವ ಹೊಕ್ಕು ನೋಡಿ ಸಾಧಿಸಿ, ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು ಜೀವ ಪರಮರಂ ಏಕೀಕರಿಸಿ ಅಲ್ಲಿ ಮಾಣಿಕ್ಯವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ ಓಂಕಾರಜ್ಯೋತಿಯಂ ಬೆರಸುತ್ತ ಉನ್ಮನಿಯ ಬೆಳಗನೊಳಕೊಂಡು ಕರ್ಣದ್ವಾರದಲ್ಲಿ ಶಂಖ ದುಂದುಭಿ ಧ್ವನಿಗಳಂ ಕೇಳುತ್ತ ಪರಮಕಾಷ್ಠಿಯಾಗಿ ತಾನೇ ಜಗತ್ತಾಗಿ ಅಣೋರಣೀಯಾನ್ ಮಹತೋ ಮಹೀಯಾನ್'' ಏಕಮೇವ ಅದ್ವಿತೀಯಂ'' ಎಂಬ ಶ್ರುತಿಪ್ರಮಾಣದರಿವು ನೆಲೆಗೊಂಡು ಷಡುಚಕ್ರ ಪ್ರಾಪ್ತಿಯಾಗಿ, ಮನ-ಪವನ-ಬಿಂದು-ರವಿ-ಶಶಿ-ಶಿಖಿಗಳನೇಕೀಕರಿಸಿ ಮೇಗಣ ಬಯಲ ಬಾಗಿಲಂ ತೆಗೆದು ಸಹಸ್ರದಳಪದ್ಮವ ಹೊಕ್ಕನು ನೋಡಾ ಅಪ್ರಮಾಣಕೂಡಲಸಂಗಮದೇವಾ.