Index   ವಚನ - 303    Search  
 
ಇನ್ನು ನಿರಾಧಾರಧಾರಣವೆಂತೆಂದಡೆ: ನಿರಾಧಾರಯೋಗದ ಮನವೆಂಬ ಮಹಾಪೀಠದ ಮೇಲೆ ಸುಜ್ಞಾನವೆಂಬ ಲಿಂಗವ ನೆಲೆಗೊಳಿಸಿ, ದ್ರವ್ಯವೆಂಬ ಹಸ್ತದಲ್ಲಿ ಮುಟ್ಟಿ ಪೂಜಿಸಿ ಭವದೂರನಾದೆನು ಕಾಣಾ ಅಪ್ರಮಾಣಕೂಡಲಸಂಗಮದೇವಾ.