Index   ವಚನ - 309    Search  
 
ನಾಡಿಧಾರಣ ವಾಯುಧಾರಣ ಅಗ್ನಿಧಾರಣ ಅಮೃತಧಾರಣ ಆಧಾರಧಾರಣ ನಿರಾಧಾರಧಾರಣ ಷಷ್ಠಿಧಾರಣವಂ ಮಾಡಿ, ಇನ್ನು ಆತ್ಮಯೋಗಿಯಾಗಿರಬಾರದೆಂದು ನಿಂದು, ತಾನೆ ತಿಳಿದು, ವಿಚಾರಿಸಿಕೊಂಡು ಅನಂತದೇಶಗಳಂ ತಿರುಗಿ ಸದ್ಗುರುಸ್ವಾಮಿಯನರಸಿ, ಅವರ ಕಾರುಣ್ಯಪಡೆವೆನೆಂದು ಬಾಹಾಗ ಸದ್ಗುರುಸ್ವಾಮಿ ಕಂಡನು. ಇದಕ್ಕೆ ಈಶ್ವರ ಉವಾಚ: ಗುಕಾರಂ ಚ ಗುಣಾತೀತಂ ರುಕಾರಂ ರೂಪವರ್ಜಿತಂ | ಗುಣರೂಪವಿಹೀನತ್ವಂ ಗುರುರಿತ್ಯಭಿಧೀಯತೇ || ಗುಕಾರಂ ಮಮ ರೂಪಂ ಚ ರುಕಾರಂ ತನುರೂಪಕಂ | ಉಭಯೋಃ ಸಂಗಮೇ ದೇವಾಃ ಗುರುರೂಪೋ ಮಹೇಶ್ವರಃ || ಗುಕಾರಂ ಚ ಗುಣಾತೀತಂ ರುಕಾರಂ ರೂಪವರ್ಜಿತಂ | ಗುಣರೂಪಮತೀತಂ ಚ ಯೋ ದದ್ಯಾತ್ ಸ ಗುರುಸ್ಮೃತಃ || ಯೋ ಗುರುಃ ಸ ಶಿವಃ ಪ್ರೋಕ್ತಃ ಶಿವಸ್ಯ ಏವ ಗುರುಸ್ಮೃತಃ | ಭುಕ್ತಿಮುಕ್ತಿಪ್ರದಾತಾ ಚ ಮಮರೂಪೋ ಮಹೇಶ್ವರಃ ||'' ಇಂತೆಂದುದಾಗಿ, ಇದಕ್ಕೆ ಶ್ರೀ ಮಹಾದೇವ ಉವಾಚ: ಪರಶಿವೋ ಗುರೋಮೂರ್ತಿ ಶಿಷ್ಯದೀಕ್ಷಾದಿಕಾರಣಾತ್ |'' ಇಂತೆಂದುದಾಗಿ, ಪರಶಿವ ತಾನೇ ಗುರುವಾಗಿ ಬಂದನಯ್ಯ ಅಪ್ರಮಾಣಕೂಡಲಸಂಗಮದೇವಾ.